Submission 4876

ಬುದ್ಧ ಮತ್ತು ನಾನು

ರಚನೆ : ಸ್ಮಿತಾ ರಾಘವೇಂದ್ರ

----------------------------------

ತಡರಾತ್ರಿಯ ನಿಶ್ಶಬ್ದದಲ್ಲಿ, ತನ್ನವರ ಉಸಿರನ್ನೂ, ಬಂಧನಗಳ ಹಿತವನ್ನೂ ಹಿಂದೆ ಬಿಟ್ಟು ಹೋದವ. ಅವನು ಹೊರಟ ದಾರಿಯೊಳಗೆ ಬೆಳಕು ಇದ್ದಿತ್ತೋ, ಅಥವಾ, ಕತ್ತಲಿನ ಅರ್ಥದ ಹುಡುಕಾಟವೋ. ಪ್ರತಿ ಬಾರಿ ಅವನ ಹೆಜ್ಜೆ ಗುರುತುಗಳನ್ನು ಹುಡುಕಿದಾಗ, ತಪ್ಪಾಗಿಯೇ ಕಂಡದ್ದು ಅವನು ಬಿಟ್ಟು ಹೋದವ ನಾನು ಬಿಟ್ಟುಕೊಡಲಾರದೆ ಉಳಿದವ ಎಂದು ನಗುವ ಬುದ್ಧ, ಧ್ಯಾನಸ್ತ ಬುದ್ಧ,ಬಾಲ ಬುದ್ಧ, ಭವ ಗೆದ್ದ ಬುದ್ಧ... ಪ್ರತಿ ರೂಪವೂ ನನ್ನೊಳಗಿನ ಶೂನ್ಯತೆಯ ಕನ್ನಡಿ. ಆದರೆ ಅದು ಬಿಟ್ಟುಹೋದವನ ನಿಶ್ಚಲ ನಗು ಆ ನಗುವಿನಲ್ಲಿ ನಾನು ಏನ್ನನ್ನು ಹುಡುಕುತ್ತಿದ್ದೇನೆ. ಹಾರಿ ಬಿಟ್ಟ ಬುದ್ಧ... ಮತ್ತೆ ನನ್ನೊಳಗೆ ಬಂದು ಕುಳಿತಿದ್ದಾನೆ.

----------------------------------

ನೋಂದಣಿ ಐಡಿ : KPFS2-8428

0
Votes
90
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top