Submission 4878

ಕಡಲ ಕುವರರು

ರಚನೆ : ಯಜ್ಞೇಶ್ ಆಚಾರ್ಯ

----------------------------------

ಕನಸಿನ ಪದದೊಳಗೆ ಧ್ವನಿ ಆದವರು ಮನದ ಮಡಿಲೊಳಗೆ ಪದವಾದವರು ಚಿಂತೆ ಎಂಬ ಚಿಂತೆಯಲ್ಲಿ ಬೆಂದವರು ಅಳಿವು ಉಳಿವೆಂಬ ನೌಕೆ ಹತ್ತಿದವರು ಬೀಸುವ ಗಾಳಿಗೆ ಎದೆಗುಂದದೆ ಮುನ್ನುಗ್ಗಿದವರು ಹತ್ತಾರು ದಿನಗಳ ಜಲಯಾತ್ರೆಯ ಕೈಗೊಂಡವರು ತಂಡದ ಹಿಡಿತ ಸಾಧಿಸಿದವರು ಬಲದ ಛಲದ ಒಡೆಯರವರು ಕರಾವಳಿಯ ಸಮುದ್ರದಂಚಿನ ಕುವರರಿವರು ದೋಣಿಗಳ ಸಮುದ್ರಕ್ಕಿಳಿಸುವರು ಚಂದಿರದಂಗಳದ ಬೆಳಕಿನಲ್ಲಿ ಗಾಳವ ಎಸೆಯುವರು ಸಾವಿಗೆ ಅಂಜಿದರೆ ಕೂಳಿಗೆ ಕಷ್ಟ ಎನ್ನುವರು, ಅಲೆಗಳ ಅಂಚುಗಳಿಗೆ ಗೊತ್ತು ಅವರ ಕಥೆ ಮಾತ್ತಾರು ಬಲ್ಲವರು ತಿಂಗಳುಗಳ ಶ್ರಮದ ತುತ್ತು ಉಂಡು ಸಂತೋಷ ಪಡುವರು ಅವರೇ ಕರಾವಳಿಯ ಮೀನುಗಾರರು ನಮ್ಮ ಹೆಮ್ಮೆಯ ಮೀನುಗಾರರು.

----------------------------------

ನೋಂದಣಿ ಐಡಿ : KPFS2-8430

9
Votes
173
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top