Submission 4868

ಅವಳು

ರಚನೆ : ಚಂದ್ರಿಕಾ ಬಿ ಹೆಚ್

----------------------------------

ಆ ದಿನ ರಾತ್ರಿ ಸಾಗಿತ್ತು ನಮ್ಮೂರ ಕರಗ ನೆರೆದಿದ್ದರು ಬೀದಿ ಕೊನೆಯಲ್ಲಿ ಬಂಧು-ಬಳಗ ಕೂಡಿತು ಕಂಗಳು ಅದಕೆ ಸಾಕ್ಷಿಯಾಯಿತು ಬೆಳದಿಂಗಳು ಜೀವನದ ರಥವನೆಳೆಯಲು ಸಜ್ಜಾಯಿತು ಎರಡು ಮನಸುಗಳು ಸಂಸಾರದ ಅಗ್ಗಿಷ್ಟಿಕೆಯಲ್ಲಿ ಬೇಯಲು ಏಕಿಷ್ಟು ತವಕ ಓ ಮನವೇ! ತಾಳ್ಮೆಯೆoಬ ಸೌದೆ ಉರಿದುಹೋಗಲು ಸಾಕಲ್ಲವೇ ಕ್ಷಣಿಕ ಹೊಟ್ಟೆ ತುಂಬಿ-ಬಿರಿಯುವಷ್ಟು ಒಲವಿನ ಔತಣ ಬಡಿಸುವ ಕೌತುಕ ನಾದಿನಿಯ ಈರ್ಷೆಯ ತಣ್ಣೀರು ಮಾಡುತಿತ್ತು ಇದರ ಕುಹಕ ಸಾವಿರ ಕನಸುಗಳ ಮಾಲೆ ಹೊತ್ತು ತುಳಿದರೇನು ಸಪ್ತಪದಿ ಭರಪೂರ ಕಷ್ಟಗಳ ಎದುರಿಸಲಿಲ್ಲವೇ ಆ ತಾಯಿ ದ್ರೌಪದಿ ಅಕ್ಕನ ಈರ್ಷೆಯ ಕಿಡಿಗೆ ಆರಿತು ತಮ್ಮನ ಬಾಳ ಜ್ಯೋತಿ ಹತಾಶೆಯಲ್ಲಿ ಹಿಡಿದು ಕೂತ ಬಿಟ್ಟುಹೋದ ತನ್ನವಳ ಮೂಗುತಿ

----------------------------------

ನೋಂದಣಿ ಐಡಿ : KPFS2-8423

4
Votes
131
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top