ಮನಸ್ಸಿಗೊಂದು ಪ್ರಶ್ನೆ
ರಚನೆ : ದರ್ಶನ .ಎಸ್. ಕೊಂಡಿಕೊಪ್ಪ
----------------------------------
ಓ ಮನಸೇ ನೀನೇಕೆ ದುಃಖದಲ್ಲಿರುವೆ ನೀನು ಖುಷಿಯಾಗಿದ್ದರೆ ನಾನುಖುಷಿಯಾಗಿರುವೆ. ನನಗೆ ಕಾಣದೆ ನೀನು ಎಲ್ಲಿ ಅವಿತಿರುವೆ? ನಿನ್ನನು ನೋಡಲು ನಾನು ಚಡಪಡಿಸುತ್ತಿರುವೆ ಒಬ್ಬರಲ್ಲಿ ಧೈರ್ಯದಿಂದಿದ್ದು ಮತ್ತೊಬ್ಬರಲ್ಲಿ ಅಧೈರ್ಯದಿಂದಿರುವೆ ನೀನೇಕೆ ಹೀಗಿರುವೆ? ನೀನೇಕೆ ಹೀಗಿರುವೆ? ಬೀಜ ಫಲಕೊಡುತ್ತದೆ ಎಂದು ಮಣ್ಣಿಂದ ತಿಳಿಯುತ್ತದೆ ನಿನ್ನ ಭಾವನೆಗಳು ನನಗೆ ಕಣ್ಣಿಂದ ತಿಳಿಯುತ್ತದೆ ನಿನ್ನಷ್ಟು ಮೃದು ಯಾರು ಇಲ್ಲ ಈ ಜಗದಲ್ಲಿ ನಿನ್ನನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ ಈ ಸಮಾಜದಲ್ಲಿ ಆದರೂ ನೀನೇಕೆ ದುಃಖದಲ್ಲಿರುವೆ, ನೀನು ಖುಷಿಯಾಗಿದ್ದರೆ ನಾನು ಖುಷಿಯಾಗಿರುವೆ...!
----------------------------------
ನೋಂದಣಿ ಐಡಿ : KPFS2-8425