ಇರುಳಿನ ಒಡಲು
ರಚನೆ : ರಾಜು ಎಂ
----------------------------------
ಬೆಳದಿಂಗಳಿಳಿದಿರಲು ಇಳೆಯ ಅಂಗಳಕೆ, ಬಯಸಿದೆ ಮನವಿಂದು ಹಕ್ಕಿ ಆಗಲಿಕೆ ಹಸುರಿನ ಬನದಲಿ ಅರಳಿರುವುದು ಹೂವೂ, ಸೊಂಪಾದ ಸೋನೆ ಹನಿ ತಂದಿರುವುದು ಕಾವು ತೊರೆ ಮೀನು ತೊರೆ ತೊರೆದು ಜಿಗಿದಿಹುದು ಆಗಸಕೆ, ಮನದ ಮಗುವನು ಹೊರ ತರುವ ಬಯಕೆ ಕಣ್ಣೆತ್ತಿ ನೋಡಿದರೆ ಕಪ್ಪು ಮೋಡಗಳ ಸಾಲು, ಕರಿ ಮೇಘಗಳ ನಡುವೆ ಮಿನುಗುತಲಿ ಬಾನು ಮುಂಜಾನೆ ಮುಂದಾಗಿ ಬರುತಿಹನು ರವಿ ಓಡಿ, ಸೋನೆಯೋಂದಿಗೆ ಸುರಿದಿದದ್ದ ಅಂದಕಾರವ ಕಾಡಿ. ಕತ್ತಲೊಂದಿಗೆ ಕತ್ತಲಿನ ಅಂದವನ ಸವಿಯುತಲಿ, ನಿಂತಿರುವೆ ಮುಂಜಾನೆ ಇರುಳನ್ನ ಕಾಯುತಲಿ.
----------------------------------
ನೋಂದಣಿ ಐಡಿ : KPFS2-8422