ಮನುಷ್ಯನ ಆಸೆ
ರಚನೆ : ವಿಜಯಲಕ್ಷ್ಮೀ ದಮ್ಮೂರ
----------------------------------
ಓ ಹಸಿರೇ, ಹೀಗೆಕೆ ಸುಮ್ಮನೆ ನಿಂತಿರೇ.. ನಾನು ನಿನ್ನಂತಾಗ ಬಯಸಿ ನಿನ್ನತ್ತಿರಕ್ಕೆ ಬಂದರೆ, ಆಗಲೇ ತಿಳಿದದ್ದು ನಿನ್ನಂತಾಗಲು ಸಾಧ್ಯವಿಲ್ಲವೆಂದು ಆ ನಿನ್ನ ಶಾಂತ ಗುಣ..... ಮನುಷ್ಯನಲ್ಲಿ ಇಲ್ಲದ ಕಾರಣ ಮನುಷ್ಯ ಜಾತಿಯೇ ಬೇರೆ ಅವನ ಅತಿಯಾಸೆ, ನಿನ್ನನ್ನು ಸಹ ಬದುಕಲು ಬಿಡದಂತಾಗಿದೆ ಸುತ್ತಲೂ ಹೊಗೆ ಉಗುಳುವ ಕಾರ್ಖಾನೆಗಳೇ ತುಂಬಿವೆ ಆಮ್ಲಜನಕದ ಕಣವೇ ಕಾಣದಂತಾಗಿದೆ ಏ ಅರಣ್ಯವೇ, ಸಸ್ಯ ಸಂಕುಲವೇ, ಕ್ಷಮಿಸು, ಮನುಷ್ಯ ಜಾತಿಯ ಕ್ಷಮಿಸು...
----------------------------------
ನೋಂದಣಿ ಐಡಿ : KPFS2-8390