Submission 4814

ದೇವರು

ರಚನೆ : ಶಾಶ್ವತ ಕೆ

----------------------------------

ಕರ್ಪೂರವ ಕರಗಿಸೋ ಭಕ್ತಿಯಲಿ ನಾ ಒಲವ ಕಂಡೆ. ನೀರವತೆಯ ನಿಸ್ವಾರ್ಥ ನಿನಾದದಲಿ ನಾ ಬೆಳಕ ಕಂಡೆ. ಎಲ್ಲೋ ನೆಲ ಸೋಕಿ ಸಾಕ್ಷಾತ್ಕಾರಕೆ ಕಾಯುವ ಪಾರಿಜಾತದಿ ನಾ ಮುಕ್ತಿ ಕಂಡೆ. ತೇಯ್ದ ಗಂಧವು ತೊಯ್ಯುವ ಹನಿಗೂ ನೀಡುವ ಗಮ್ಮಲ್ಲಿ ನಾ ಗೋಪ್ಯತೆ ಕಂಡೆ. ಮಂದ ದೀಪವು ಮಗ್ನ ಮಾಡುವ ಮೌನದಿ ನಾ ಸದ್ದು ಕಂಡೆ. ಆಕಾರ ನಿರಾಕಾರದ ಆಸ್ಥೆಯಲಿ ನಾ ಸಾಕಾರ ಕಂಡೆ. ಗುಡಿಯ ಗರ್ಭದ ಗಂಟೆಯ ಮಾರ್ದನಿಯಲಿ ಮಾದವತೆ ಕಂಡೆ. ಎಲ್ಲವ ಕಂಡರೂ ಅಸ್ತಿತ್ವವ ಹುಡುಕುತ ಕುಳಿತೆ.. ನಗ್ನತೆಯ ಬದುಕೆ ದೇವರೆಂಬುದು ನಾನರಿತೆ..

----------------------------------

ನೋಂದಣಿ ಐಡಿ : KPFS2-8388

27
Votes
334
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top