Submission 4812

ನೀ ಹಚ್ಚುವ ದೀಪ

ರಚನೆ : ದೊಡ್ಡಿ ಪ್ರವೀಣ್ ವಿ

----------------------------------

ನೀ ಹಚ್ಚುವ ದೀಪಗಳೆಲ್ಲ ನಿನ್ನ ಹೃದಯದ ಅಂದಕಾರಕ್ಕೆ ಬೆಳಕಾಗಿರಲೀ ನೀ ಹಚ್ಚುವ ದೀಪಗಳೆಲ್ಲ ಬೇರೊಬ್ಬರ ಹಾದಿಗೆ ದಾರಿದೀಪಗಳಾಗಿರಲಿ ನೀ ಹಚ್ಚುವ ದೀಪಗಳೆಲ್ಲ ನಿಮ್ಮ ಮನ ಮನೆಗಳ ಅಜ್ಞಾನವ ತೊಳೆವ ಸುಜ್ಞಾನವಾಗಿರಲೀ ನೀ ಹಚ್ಚುವ ದೀಪಗಳೆಲ್ಲ ಮತಾಂದವ ಮರೆಸೋ ಮಾನವೀಯತೆಯ ಹಣತೆಯಾಗಿರಲಿ ನೀ ಹಚ್ಚುವ ದೀಪಗಳೆಲ್ಲ ಜಾತಿಮತವ ತೊರೆಯೋ ಪ್ರೀತಿ ಸ್ನೇಹವಾಗಲಿ ನೀ ಹಚ್ಚುವುದು,ದೀಪವಾಗಿರಲಿ ಬೇರೊಬ್ಬರ ಮನೆಗೆ ಬೆಂಕಿಯಾಗದಿರಲಿ

----------------------------------

ನೋಂದಣಿ ಐಡಿ : KPFS2-8387

6
Votes
123
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top