Submission 4818

ಲೇಖನಿ

ರಚನೆ : ಭವ್ಯ ಹೆಚ್.ಟಿ

----------------------------------

ಕರೆಯುವರು ನಿನ್ನ ಲೇಖನಿ ಉಸಿರಾಡದಿದ್ದರೂ ಆಗಿರುವೆ ಎಲ್ಲರ ಕಣ್ಮಣಿ ಹುಟ್ಟಿದ ಮಗುವಿನಿಂದ ಸಾಯುವ ಮುದಿ ಜೀವದ ಕೈಯಲ್ಲಿರಲು ಎಂದಿಗೂ ಜೀವಂತ ನೀ.. ಕಲ್ಲಂತಿರುವ ಹೃದಯವ ಕವಿಯಾಗಿಸಲು ಶಾಹಿ ಚೆಲ್ಲಿದರೆ ಮೈಯೆಲ್ಲಾ ಕೊಳಕು ಬರೆಯಲು ಅಕ್ಷರವ ನನ್ನ ಪುಸ್ತಕವೆಲ್ಲಾ ಸೊಗಸು.. ಬಣ್ಣ-ಬಣ್ಣದಲಿ ತುಂಬಿ ತುಳುಕಲು ಪ್ಲಾಸ್ಟಿಕ್ ಕಡ್ಡಿಯಲಿ ನೀ ಬಂಧಿಯಾಗಿರಲು ಆ ಪ್ಲಾಸ್ಟಿಕ್ ಕಡ್ಡಿಯೇ ನಿನಗೆ ಶ್ರೀರಕ್ಷೆಯಾಗಿರುವುದು.. ದುಡ್ಡುಕೊಟ್ಟು ಕೊಂಡುಕೊಳ್ಳುವರು ಅಂಗಡಿಯಲ್ಲಿ ಇಂಕ್ ಖಾಲಿಯೆಂದು ಎಸೆಯುವರು ಯಾವುದೋ ಕಸದ ತೊಟ್ಟಿಯಲ್ಲಿ ಆದರೂ ನೀ ಕೈ ಬಿಡುವುದಿಲ್ಲ ಅವರ ಬರವಣಿಗೆಯಲ್ಲಿ..

----------------------------------

ನೋಂದಣಿ ಐಡಿ : KPFS2-8392

1
Votes
101
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top