Submission 4735

ಕವನವೆಂಬ ಕೂಸು

ರಚನೆ : ವೈಷ್ಣವಿ ಪಿ ಯು

----------------------------------

ಹೊತ್ತಿಲ್ಲದೇ ಹೊಯ್ದಾಡುವ ಚಿಂತನಾ ಲಹರಿಗೆ ಹುಸಿ ಮುನಿಸು, ಆವೇಷ, ಬೇಸರ, ಕಳವಳ ಮೇಳೈಸುವ ಭಾವಗಳ ಸುಳಿಗೆ ಧ್ವನಿ ಉಡುಗಿ ಉಳಿದುಹೋದ ಮಾತಿಗೆ ಧ್ವನಿತವಾಗಿಯೂ ಪ್ರವಹಿಸದ ಸುದ್ದಿಗೆ ಹಂಚಿಕೊಳ್ಳದೆ ಬತ್ತಿಹೋದ ಮನ ತುಂಬಿದ ನಗುವಿಗೆ ಕಾಣದೆ ಹರಿದ ಕಣ್ಣಂಚಿನ ನೀರಿಗೆ ಶಬ್ಧಗಳ ಮಾಲೆಯ ಮಾತಿನ ಮಲ್ಲಿಗೆ ಸಮಯವ ಸಹಿಸುವ ಮೌನಿಗೆ ಕಾಗದದೊಂದಿನ ಲೇಖನಿಯ ಬೆಸುಗೆ, ಭಾವವೇ ಸಾಕು ಹುಟ್ಟಲು ಕವನವೆಂಬ ಕೂಸಿಗೆ.

----------------------------------

ನೋಂದಣಿ ಐಡಿ : KPFS2-8328

0
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top