ನನ್ನ ನಾಡು
ರಚನೆ : ಶ್ರೇಯಾ ನಿಂಗಸಾನಿ
----------------------------------
ನೀಡಿದೆ ಆಶ್ರಯ ಎನಗೆ ತೀರಿಸಲಿ ನಿನ್ನ ಋಣ ಹೇಗೆ ಅನ್ನ ನೀಡಿದೆ ಎಮಗೆ ಧನ್ಯವಾದ ಮಾತೆ ಭುವನೇಶ್ವರಿಗೆ ಮಾತೆ ಎನ್ನ ಕಾರ್ಯ ನಿನ್ನ ಕೃಪೆಯಿಂದ ಕನ್ನಡ ತಾಯಿ ನಾನು ನಿನ್ನ ಕಂದ ಇಲ್ಲುಂಟು ಹಳೆಬೀಡು ಹಂಪಿಯ ಅಂದ ನೋಡುವ ಭಾಗ್ಯ ಕೊಟ್ಟ ಅದೆಲ್ಲ ನಿನ್ನಿಂದ ಸೌಮ್ಯ ಕಲಾಕೃತಿಗಳ ಸೂಕ್ಷ್ಮ ಶಿಲ್ಪಕಲೆ ಏರಬಹುದು ಸುಂದರ ಸಹ್ಯಾದ್ರಿ ಮಲೆ ಅರ್ಪಿಸುವೆ ಮಾತೆ ನಿನಗೊಂದು ಹೂಮಾಲೆ ಎನ್ನ ನಾಡಿನ ಮಣ್ಣ ವಾಸನೆ ಮತ್ತು ಎನ್ನ ನಾಡಿನ ಶ್ರೀಗಂಧ ಇನ್ನೆಲ್ಲೂ ಕಾಣೆ ಎನ್ನ ನಿಜವಾದ ಜನ್ಮದಾತೆ ನೀನೆ
----------------------------------
ನೋಂದಣಿ ಐಡಿ : KPFS2-8329