ಮನದಾಳದ ತಳಮಳ
ರಚನೆ : ದೀಪಿಕಾ
----------------------------------
ಮನವೆಂದಿತು ಮರುಗದಿರಲು ಅದೇ ಮನವೆಂದಿತು ಮುಗುಳ್ನಗದಿರಲು ಮನವೆಂದಿತು ಮರೆಯಾಗದಿರಲು ಅದೇ ಮನವೆಂದಿತು ಮರಳದಿರಲು ಮನವೆಂದಿತು ಮಾಯವಾಗದಿರಲು ಅದೇ ಮನವೆಂದಿತು ಮಿನುಗದಿರಲು ಮನವೆಂದಿತು ಮುನಿಯದಿರಲು ಅದೇ ಮನವೆಂದಿತು ಮಾತನಾಡಿದಿರಲು ಮನವೆಂದಿತು ಮರೆಯದಿರಲು ಅದೇ ಮನವೆಂದಿತು ಮುಂದಾಗದಿರಲು ಮನವೆಂದಿತು ಮುದುಡದಿರಲು ಅದೇ ಮನವೆಂದಿತು ಮುಡಿಯದಿರಲು ಮನವೆಂದಿತು ಮರುಳಾಗದಿರಲು ಅದೇ ಮನವೆಂದಿತು ಮುಗಿಸದಿರಲು..!
----------------------------------
ನೋಂದಣಿ ಐಡಿ : KPFS2-8172