Submission 4524

ಖಾಲಿ ಜೇಬು ಮತ್ತು ಹೃದಯ

ರಚನೆ : ಸಿದ್ದಣ್ಣ ಪೂಜಾರಿ

----------------------------------

ನನ್ನದು ಖಾಲಿ ಜೇಬು ಚಿಲ್ಲರೆ ನೋಟುಗಳಲ್ಲಿ! ಕಾರಣ ಎಲ್ಲರ ನೋಟ ಬದಲಾಗಿದೆ ಅವರು ಚಾಳೀಸು ನನ್ನ ಕಿಸೆ ದಾಟುತಿಲ್ಲ! ನೀವು ಯಾಕೆ ನಿಮ್ಮ ಜೇಬನಿಂದ ನ್ನ ನೋಡುತ್ತಿರಿ? ನನಗೆ ಇರೋದು ಒಂದೇ ಕಿಸೆ ಮತ್ತು ಹೃದಯ! ಇದ್ದದ್ದರಲ್ಲಿ ಖುಷಿ ತುಂಬಿನಿ ನನ್ನ ಕಿಸೆಯಲ್ಲಿ ಕನಸುಗಳು ತುಂಬಿವೆ ಭರವಸೆಗಳು ಜೋಪಾನವಾಗಿವೆ ನಿಯತ್ತಿನ ಕಾಯಕವಿದೆ ಆದರೂ ಜೇಬು ಖಾಲಿ! ಕಷ್ಟಕ್ಕೋ- ನಷ್ಟಕ್ಕೊ ಕಿಸೆ ತುತಾಗಿದ್ದು ಸತ್ಯ ಹೊಲಿಗೆ ಹಾಕಿ! ಕತ್ತರಿ ಏಕೆ? ನನ್ನ ಜೇಬು ನೋಡಿ ಕೈ ಹಾಕಿದರೆ ಏನೂ ಸಿಗದು! ಈಗೀಗ ಹೃದಯಕ್ಕೆ ಯಾರೂ ಕೈ ಹಾಕುತ್ತಿಲ್ಲ! ಯಾಕೋ ಖಾಲಿ ಜೇಬಿನ ನಂತರ ಹೃದಯವೇ ಕಾಣುತ್ತಿಲ್ಲ!

----------------------------------

ನೋಂದಣಿ ಐಡಿ : KPFS2-8171

21
Votes
322
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top