ಅಮ್ಮ
ರಚನೆ : ಡಾ. ಸಿದ್ದಣ್ಣ ಡಿ.ಟಿ
----------------------------------
ರಕ್ತ ಮಾಂಸಗಳನ್ನು ಧಾರೆಯೆರೆದು ಪ್ರಸವಿಸುವ ಜೈವಿಕ ದೈಹಿಕ ಸಂಬಂಧದ ಆದರ್ಶದವಳು. ಹೆರುವವಳು, ಹೊರುವವಳು, ಉಸಿರಿಯಿತ್ತವಳು ಕಣ್ಣಿಟ್ಟು ಕಾಯುವವಳು, ಬದುಕಿತ್ತು ಮುದ್ದಿಸುವಳು. ಒಂಭತ್ತು ತಿಂಗಳಿಂದ,ತೊಂಬತ್ತು ವರ್ಷಗಳ ವರೆಗೆ ಮಗುವಿಗೆ ಉಣಬಡಿಸಿ ತಾನು ಉಂಡಷ್ಟೇ ಸುಖಿಸಿದವಳು. ಮಗುವಿನ ಆಳುವ ಹಟ, ಆಟ ಪಾಠ ನಗು ಕಂಡು ಖುಷಿ ಗೊಂಡವಳು ಪ್ರೀತಿ,ವಾತ್ಸಲ್ಯ,ಅಭಿಮಾನ, ಅಕ್ಕರೆ-ಸಕ್ಕರೆಯ ಹೃದಯ ಸ್ಪರ್ಶಿ ಜೀವ ಸುಧೆಯ ಮೌಲ್ಯಗಳನ್ನು ಬಿತ್ತಿದವಳು. ಬದುಕಿಗೆ ಭರವಸೆ, ಶಕ್ತಿ, ಧೈರ್ಯ, ಚೈತನ್ಯ, ಆತ್ಮಾಭಿಮಾನ, ಮಾನವೀಯತೆಯನ್ನು ಮೈ ಮನದಾಳದಲ್ಲಿ ತುಂಬಿ ಮನುಷ್ಯ ನನ್ನಾಗಿ ಮಾರ್ಪಡಿಸಿದವಳು. ಮಮತೆ ಯಿಂದ ಮುದ್ದಿಸಿ ಮೆತ್ತನೆಯ ಹಾಸಿಗೆಯ ಮಡಿಲಾದವಳು. ತನುವಿಗೆ ಬೆಚ್ಚಗಿನ ಹೊದಿಕೆಯಾದವಳು. ಬೇಸರಿಸಿಕೊಳ್ಳದೆ ಬೇವರುಸುರಿಸುವ ವಿಶ್ರಮಿಸದೆ ಪರಿಶ್ರಮಿಸುವವಳು ಅಮ್ಮ.
----------------------------------
ನೋಂದಣಿ ಐಡಿ : KPFS2-8059