ಅನ್ನದಾತನ ಅಳಲು
ರಚನೆ : ಚೇತನ ನಾ ನೆಗಳೂರ
----------------------------------
ಭೂತಾಯಿ ಮಡಿಲಲ್ಲಿ ಹುಟ್ಟಿದ ಮಾನವ, ಬೆವರಿನ ಹನಿಗಳಷ್ಟೇ ಅವನ ಗೌರವ.. ಸೂರ್ಯನ ಕಿರಣದಲ್ಲಿ ರೈತರು ಬೆಳೆಗಳನ್ನ ಬೆಳೆಯುವುದು, ಸರ್ಕಾರ ಅವರ ಬೆಳೆಗೆ ಬೆಲೆಯಿಲ್ಲದಂತೆ ಮಾಡುವುದು... ಮಳೆಯಲ್ಲಿ ನೆಂದು, ಬಿಸಿಲಲ್ಲಿ ಬೆಂದು ಮತ್ತೊಮ್ಮೆ ಕನಸಿನ ಬೀಜ ಬಿತ್ತೋಣ, ಹೋರಾಟ ಮಾಡಿ, ಕಾದಾಟ ಮಾಡಿ ಬೆಳೆಗೆ ಬೆಲೆಯನ್ನು ಕಂಡುಕೊಳ್ಳೋಣ.. ಅನ್ನದಾತನ ಕಣ್ಣೀರಿಗಿಲ್ಲ ಯಾವುದೇ ಬೆಲೆ, ಅವನ ಶ್ರಮದ ಬೆವರಿಗಾದರೂ ಕೊಡಿ ಸ್ವಲ್ಪ ಬೆಲೆ... ಅನ್ನದಾತರು ಬೆಳೆದರಷ್ಟೇ ಎಲ್ಲರಿಗೂ ಅನ್ನ, ಇಲ್ಲವಾದರೆ ಎಲ್ಲರ ಬಾಯಿಗೂ ಮಣ್ಣ.. ಭೂ ತಾಯಿಯ ದೇವರಂತೆ ನಂಬಿರುವವರು ನಾವುಗಳೇ, ನಮಗೆನಾದರೂ ಆದರೆ ಆ ನನ್ನವ್ವ ಸುಮ್ಮನಿರುವಳೇ...
----------------------------------
ನೋಂದಣಿ ಐಡಿ : KPFS2-8062