Submission 4375

ನನ್ನ ನಾಡು ಕನ್ನಡನಾಡು

ರಚನೆ : ಹರೀಶ್. ಎಂ

----------------------------------

ಕನ್ನಡಾಂಬೆಯ ಮಕ್ಕಳು ನಾವು ಶಾಂತಿಯ ತೋಟದ ಹೂವುಗಳು ನೆಲ, ಜಲ,ಭಾಷೆ ನಮ್ಮಯ ಪ್ರಾಣ ಅರಿತು ನಡೆದರೆ ಪ್ರೀತಿಯ ತಾಣ. ಬಾರಿಸು ಕನ್ನಡ ಡಿಂಡಿಮವ ಕನ್ನಡ ತಾಯಿಯೇ ನಮ್ಮವ್ವ. ಮನದೊಳು ಅಡಗಿದೆ ನೋವಿನ ಮೋಹ ಹೆಚ್ಚಾಗಿದೆ ಇಲ್ಲಿ ಪರಭಾಷೆಯ ವ್ಯಾಮೋಹ. ಚೆನ್ನಮ್ಮ ಪುಲಕೇಶಿ, ಆಳಿದ ನಾಡಿದು ರಾಯಣ್ಣ ರಂತಹ ವೀರರ ಬೀಡಿದು. ಮೆರೆಸುವ ತಿಳಿಸುವ ಅರಿಯದವರಿಗೆ ಕಲಿಸುವ ಅವಳ ಹೆಸರಿಗೆ ಚ್ಯುತಿ ಬಾರದಂತೆ ಕಾಯುವ. ಕೂಗಿ ಹೇಳು ಇದು ನನ್ನ ನಾಡು ಸಹೃದಯಿ ಕನ್ನಡಿಗನ ಕನ್ನಡನಾಡು.

----------------------------------

ನೋಂದಣಿ ಐಡಿ : KPFS2-8058

17
Votes
194
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top