ಸ್ವಾದಿಷ್ಟ ಕನ್ನಡ
ರಚನೆ : ಸನತ್ ಕದಂಬ
----------------------------------
ನಾವಿಣ್ಯತೆಯಲ್ಲಿ ನವಿರು ಎನ್ನ ಕನ್ನಡ ಪ್ರಾವಿಣ್ಯತೆಯಲ್ಲಿ ನವಿಲು ಎನ್ನ ಕನ್ನಡ ಚರಿತ್ರೆಯಲ್ಲಿ ಮೇಟಿ ಎನ್ನ ಕನ್ನಡ ಪವಿತ್ರತೆಯಲ್ಲಿ ಸಪ್ತಸಾಗರವ ಧಾಟಿತೆನ್ನ ಕನ್ನಡ ಸೊಬಗಿನಲ್ಲಿ ಸೊಂಪು ಎನ್ನ ಕನ್ನಡ ಸೊಗಡಿನಲ್ಲಿ ಇಂಪು ಎನ್ನ ಕನ್ನಡ ರಚನೆಯಲ್ಲಿ ರಂಜನೆ ಎನ್ನ ಕನ್ನಡ ಆಚರಣೆಯಲ್ಲಿ ಮನರಂಜನೆ ಎನ್ನ ಕನ್ನಡ ಅಂದದಲ್ಲಿ ಆಗುಂಬೆ ಎನ್ನ ಕನ್ನಡ ಚೆಂದದಲ್ಲಿ ಶ್ರೀಗಂಧ ಎನ್ನ ಕನ್ನಡ ನುಡಿಯುವಲ್ಲಿ ಸಜ್ಜಿಗೆ ಎನ್ನ ಕನ್ನಡ ಕಡೆಯುವಲ್ಲಿ ಮಜ್ಜಿಗೆ ಎನ್ನ ಕನ್ನಡ ಅಂಬರಕೆ ನೇಸರನೆನ್ನ ಕನ್ನಡ ಚಂದಿರಕೆ ಕೇಸರನೆನ್ನ ಕನ್ನಡ ತನು ಕನ್ನಡ, ಧನ ಕನ್ನಡ, ಮನ ಕನ್ನಡವೇ! ಕನ್ನಡ ಅಡಿ ಕನ್ನಡ, ಮುಡಿ ಕನ್ನಡ, ನುಡಿ ಅಮೃತದ ಸವಿಗನ್ನಡ.
----------------------------------
ನೋಂದಣಿ ಐಡಿ : KPFS2-8031