Submission 4327

ಒಲವು

ರಚನೆ : ರಾಜಮ್ಮ ಪಿ ಸಿ

----------------------------------

ಎಲ್ಲಕ್ಕೂ ಬಳಸುವ ನಮ್ಮೊಲವದು ದಾರಿ ತಪ್ಪದಂತೆ ಕಾಯ್ದಿಡಲು, ಅರುಹಬೇಕಿದೆ, ಒಮ್ಮೆಯಾದರು ನಾನಿನ್ನೊಳಗೆ, ನೀನನ್ನೊಳಗೆ ಮಾತು ತಪ್ಪದಂತೆ. ಬರುವ ಜರೂರತ್ತಿದೆ ನಿನಗೂ, ನನಗೂ, ನಮ್ಮಿಬ್ಬರ ಒಲವ ನಿಲ್ದಾಣಕೆ. ಕೈಗೆಟುಕುದ ಅಂತರವೇ ಆದರೂ, ಮಾತುಗಳು ನಿಂತು ಹೋದರೂ ಜಗಕಿದೆ ನಮ್ಮೊಲವಿನಾರ್ದತೆ. ಬಂದುಬಿಡು ಒಮ್ಮೆಯಾದರೂ ನಿನ್ನೊಲವಿನಲಿ ನಾ ಹಸುನೀಗುವಂತೆ, ಜಗದ ಒಲವದು ಮತ್ತೊಮ್ಮೆ ಹುಟ್ಟಿ ಬರಲಿ ಹೊಸ ಜಗದ ಹಸಿಗೂಸಿನಂತೆ, ಹೊಸ ರಾಗವೊಂದುದಯಿಸಿದಂತೆ.

----------------------------------

ನೋಂದಣಿ ಐಡಿ : KPFS2-8029

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top