Submission 4325

ನಿತ್ಯ ಸತ್ಯ

ರಚನೆ : ಡಾ. ವೇದ ವಿ ಪುರೋಹಿತ

----------------------------------

ಜೀವನದ ಅನಿಶ್ಚಿತೆಯ ಭಯವುಂಟು ಎಲ್ಲರಿಗೂ ಆದರೂ ನೀನೇಕೆ ಅಂಜುತಿರುವೆ!? ಕಷ್ಟಕಾರ್ಪಣ್ಯಗಳು ಎಲ್ಲರಿಗೂ ಉಂಟೆಂಬ ವಾಸ್ತವದ ಸಂಗತಿಯ ಮರೆಯುತಿರುವೆ.!! ಆಸೆ ಕನಸುಗಳೆಂಬ ಗಾಳಿ ಗೋಪುರ ಕಟ್ಟಿ, ಇರುವ ಸಂತಸಗಳನು ದೂರ ಸರಿಸಿ, ಇನ್ನಷ್ಟು ಮತ್ತಷ್ಟು ಸುಖಕಾಗಿ ಹಂಬಲಿಸಿ ಬಾಳ ಓಟದ ಪಂದ್ಯ ಮಾಡುತಿರುವೆ |೧| ದುಃಖ ಸುಖಗಳು ಎಲ್ಲ ಕರ್ಮದಾ ಫಲಗಳು, ಗಳಿಸಿದ್ದು ಉಣಬೇಕು ಎಂಬ ತಥ್ಯ, ತಿಳಿದು ಮುನ್ನಡೆಯುತಿರು ಪರರಿಗುಪಕರಿಸುತಿರು ಇದೇ ತಾನೆ ಜೀವನದ ನಿತ್ಯ ಸತ್ಯ |೨| ಅನುದಿನವು ಎಲ್ಲರನು ಕಾಯುವ ಕೈಗಳು ನಿನ್ನನ್ನು ಎಂದೆಂದೂ ಕಾಯುತಿಹವು. ಕಾಯುವಾ ಕೈಗಳಿಗೆ ಕೈಮುಗಿದು ತಲೆ ಬಾಗಿ, ನಿಶ್ಚಿಂತನಾಗಿರು ನೀ ಎಲ್ಲ ಮರೆತು |೩|

----------------------------------

ನೋಂದಣಿ ಐಡಿ : KPFS2-8028

22
Votes
218
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top