ಮನವೇ ನೀನೇಕೆ ಮೌನಿಯಾದೆ ?
ರಚನೆ : ಕೆ.ಆರ್.ಗಿರೀಶ
----------------------------------
ಓ ಮನವೇ,ನೀನೇಕೆ ಮೌನಿಯಾದೆ? ಅವಡುಸವಡಿನಾ ಅಲೆ ತರಂಗಾಂತರಂಗವಾಗಿ ಬವಳಿ, ಅನುಪಮದ ಸಹನೆಗೆ ನೀರವತೆಯು ಮಾಸಬೇಕಿದೆ!, ನೀ ಬಿಕ್ಕಿದ ಕಹಿ ನೆನಪಿಗೆ ನವ ಪರ್ವ ಸೃಷ್ಟಿಸಬೇಕಿದೆ, ಮುಖ ವ್ಯಾಘ್ರ,ನೀನೇ ಪ್ರತಿಬಿಂಬ, ಅಂತರಾಳವು ನೀನೆ,ಅಂತಃಕರಣವು ನೀನೇ, ಸಾಧನೆಯಲಿ ನವ ಕಾವ್ಯ ಬರೆಯಬೇಕಿದೆ ನೀನು, ಓ ಮನವೇ ನೀನೇಕೆ ಮೌನಿಯಾದೆ? ಓ ಮನವೇ! ಕಳಚಿ ಬಿಡು ಈ ಮೌನ! ನೀ ಸ್ಥಿರವಲ್ಲ,ಅನಂತದಾಚೆಗೆ ತೊಯ್ದು ಬಿಡು, ಹಗೆತನದ ಈ ಮೌನ!, ಉಸಿರುಗಟ್ಟದ ಹಾಗೆ! ಒಲವ ಭಾವ ಬಂಧಿಸಲು,ನಗು ಮೊಗದಿ ಒಪ್ಪಿಬಿಡು ಸರ್ವರಿಗೂ ಸಮ ಬಾಳು,ಸರ್ವರಿಗೂ ಸಮಪಾಲು ಸರ್ವ-ಹಿತರಕ್ಷಣೆಗೆ ಜಯವಾಗಲೆಂದು!
----------------------------------
ನೋಂದಣಿ ಐಡಿ : KPFS2-8027