ತಗ್ಗಿ ನಡೆ
ರಚನೆ : ಚನ್ನಾ ಎಲ್.ಜಿ
----------------------------------
ಈ ಮಣ್ಣ ಕಣದೊಳಗೆ ಜೀವಜಲ ಚೈತನ್ಯ ಯಾರಿಗೆಂದಿಗು ಭೇದ ಮಾಡಲಿಲ್ಲ ಕರಿಬಿಳಿಯ ವರ್ಣಗಳನಿಬ್ಭಾಗ ಮಾಡದೆಯೆ ಹಗಲಿರುಳನೆರಡನ್ನು ನೀಡಿತಲ್ಲ ಎಲ್ಲ ತಿಳಿದಿಹೆನೆಂದು ಒಲ್ಲೆನೆನ್ನಲು ಬೇಡ ಎಲ್ಲ ತಿಳಿದವರೆಂದು ಬೀಗಲಿಲ್ಲ ಎಲ್ಲೆ ಮೀರಿದ ಮಾತು ನೀನೆಂದು ಆಡದಿರು ಕಲಿಕೆಗೆಲ್ಲಿದೆ ಎಲ್ಲೆ ಕಲಿಯಲೆಲ್ಲ ಕಣ್ಣಿಗನಿಸಿದ ಸತ್ಯ ಮಿಥ್ಯೆಯಾಗಿರಬಹುದು ಅಂತರಾಳದಿ ನೋಡು ಜಗದ ನಿಜವ ಆರು ನಿನ್ನವರೆಂದು ಅರಿತು ನೀ ನಡೆಬೇಗ ಆರು ಅರಿಗಳ ಸಂಗ ತರುವ ನೋವ ಬಾ ಮನುಜ ಜಗದೆಡೆಗೆ ಮನುಜನಾಗುತ ಮೊದಲು ಜಾತಿ ಸಂಕೋಲೆಗಳ ಬಲೆಗಳನು ಬಿಡಿಸಿ ಎಲ್ಲರೊಳಗೊಂದಾಗಿ ಬಾಳಲೆಂದೆಣಿಸಿ
----------------------------------
ನೋಂದಣಿ ಐಡಿ : KPFS2-7935