ವಿಷಣ್ಣತೆ
ರಚನೆ : ಎಸ್ ಮಂಜುನಾಥ್
----------------------------------
ಬಸ್ಸಿನ ನಿಲುಗಡೆ ತಾಣವಿತ್ತೊಂದು ಕಡೆ ಕಾದಿದ್ದರಲ್ಲಿ ಗರ್ಭಿಣಿ ಮುದುಕನೋರ್ವ ಆಕೆಯ ಉಬ್ಬಿದುದರವ ಆತ ನೋಡುತಿದ್ದ ಮೆಲ್ಲನೆ ಕೇಳಿದ ಎಂದಿರುವುದು ಹೆರಿಗೆ ಮುಳುಗಿದ್ದಳಾಕೆ ಯೋಚನಾಲಹರಿಯಲಿ ಆನನದಿ ಹೊಮ್ಮುತಿತ್ತು ದುಃಖದ ಛಾಯೆ ಕಷ್ಟಕಾಲವಿದು ನಿನಗೆ, ಪತಿಯೆಲ್ಲಿಹನು” ನಾಕು ಮಾಸವಾಯಿತು ಅವ ನನ್ನ ಬಿಟ್ಟು” ಇತರೆ ಯಾರು ನಿನಗೆ, ನಿನ್ನವರು, ಮಿತ್ರರು?” “ನಾನೊಬ್ಬಳೇ, ರೋಗಸ್ತ ತಂದೆಯೊಡನೆ” ಅವನಿಗೇನು ರೋಗವೆಂದು ಕೇಳಬಹುದೇ” “ನಾ ಯಾರೆಂದು ಗುರುತು ಹಿಡಿಯಲಾರನು” ಅಷ್ಟರಲ್ಲಿ ಬಸ್ಸು ಬಂತು ಎದ್ದು ನಿಂತಳಾಕೆ “ಅಪ್ಪ, ಬನ್ನಿ ಮನೆಗೆ ಹೋಗುವ” ಎಂದಳಾಕೆ
----------------------------------
ನೋಂದಣಿ ಐಡಿ : KPFS2-7934