ಕನ್ನಡದ ಕುಲ ದೇವತೆ
ರಚನೆ : ರಘು ಎಸ್ ಮಮದಾಪುರ
----------------------------------
ಜೋಗದ ಜೋಳಿಗೆಯಲ್ಲಿ ಹರಿಯುವ ಸೌಂದರ್ಯ ಲಹರಿಯವಳು, ಗಂಧದ ಗುಡಿಯ ಕುಲದೇವತೆಯವಳು, ಮಲೆನಾಡಿನ ಸೊಂಪಾದ ಸೊಬಗಿನವಳು, ಪಶ್ಚಿಮ ಘಟ್ಟದೂದ್ದಕ್ಕೂ ಹಸಿರು ಸೆರಗು ಜಾಚಿ ನಿಂತವಳು, ವಿಜಯ ನಗರ ಸಂತೆಯಲಿ ಮುತ್ತು, ರತ್ನಗಳ ಹಂಚಿದ ಸಿರಿವಂತೆಯವಳು, ವಿಶ್ವ ಮಾನವ ಕುಲದ ಜನನಿ ಯವಳು, ಕನ್ನಡ ಸಾಹಿತಿಗಳ ಮನದಾಳದಿ ಹರಿಯುತ್ತಿರುವ ಸ್ವಚ್ಚಂದವಾದ ತಲ ಕಾವೇರಿಇವಳು, ಕನ್ನಡ ಕಾವ್ಯ ರಚನೆಗೆ ಕವಿಗಳ ಮನಸ್ಸಿನ ಸ್ಪೂರ್ತಿ ಇವಳು, ಕನ್ನಡಿಗರ ಭಾವ ಇವಳು ಕರುನಾಡ ಭುವನೇಶ್ವರಿ ಕನ್ನಡಾಂಬೆ ಇವಳು.
----------------------------------
ನೋಂದಣಿ ಐಡಿ : KPFS2-7936