ಸವಿಗನ್ನಡ
ರಚನೆ : ಚನ್ನಕೇಶವ ಜಿ ಲಾಳನಕಟ್ಟೆ
----------------------------------
ಸವಿಸವಿ ಕನ್ನಡ ಸವಿಯುವ ಬನ್ನಿರಿ ಬಳಸುತಲೆಲ್ಲೆಡೆ ಗೌರವದಿ// ಎನೆ ಎನೆ ಕನ್ನಡ ಎದೆಯೊಳು ತುಡಿತವು ಹೃದಯದ ಮಿಡಿತವು ತಾಯ್ನುಡಿಯು/ ಹನಿ ಹನಿ ಇಬ್ಬನಿ ಹೊಳಪಿನ ಭಾಷೆಯು ಹೊನ್ನುಡಿಗಟ್ಟಿನ ಚೆನ್ನುಡಿಯು// ಸಿಹಿ ಸಿಹಿ ಜೇನಿನ ಸವಿಮಾಧುರ್ಯವು ಆಡುವರೆದೆಯೊಳು ಶರ್ಕರವು/ ನುಡಿ ನುಡಿದೆಡೆಯೊಳು ಕಿವಿನಿಮಿರುತ್ತಲಿ ಆಲಿಸುತಾಗಲೆ ಮೈಮನವು// ತೊದತೊದಲುತ್ತಲೆ ಮೊದಮೊದಲಾಡಿದ ಅಮ್ಮನೆ ಕಲಿಸಿದ ಭಾಷೆಯಿದು/ ಎದೆಯದೆಯುಬ್ಬಿಸಿ ಆಡುವೆನನುದಿನ ಎನ್ನೊಳಗಡಗಿದ ಗರ್ವವಿದು//
----------------------------------
ನೋಂದಣಿ ಐಡಿ : KPFS2-7921