Submission 4204

ನಕ್ಕಾಂವನೇ ಗೆದ್ದಾಂವ

ರಚನೆ : ಗಣೇಶ ಹೆಗಡೆ

----------------------------------

ಹಿಂಗ ಕುಂತಿ ಯಾಕ ಮಂದ‌ ನಗಿ ಬೀರ ಹಂಗ ನಕ್ಕು ಮನ ಹಗುರಾಗಬೇಕ ಹಂಗಿನ ಮಾತೀಗ ತಲಿ ಕೆಡುವದ್ಯಾಕ ಹಂಗ ಕೇಳಿ ಹಿಂಗ ಬಿಟ್ಹಾಕಬೇಕ ಅಂತಿ ಕಂತಿಯ ಸಂತಿಯ ಚಿಂತ್ಯಾಕ ಕುಂತರೂ ನಿಂತರೂ‌ ಹಳಿತಾರ ಹಂಚಿನ ಮ್ಯಾಗ ರೊಟ್ಟಿ ಸುಟ್ಟಂಗ ಚಿಂತಿ ಸುಡುತಾದ‌ ಮನಸನ್ನ ಮಂದಿಯ ಮಾತಿಗ ಅಂಜಿ‌ ಕುಳಿತರ ಗಂಜಿಯೂ ಸಿಗದಂಗಾದೀತ ನೋಡ ನಂಜಿನ ಮಾತ ಹಿಂಜಿ ಬೀಸ್ಹಾಕ ಬಂಡಿಯಂತೆ ಬಾಳು ಸಾಗಲೆಬೇಕ ಅಮಾಸಿ ಹುಣಮಿ‌ ಹೊರಳಿ ಮರಳ್ತಾವ ಕಾಲ ಚಕ್ರದ ಈ ಸುಳಿಯೊಳಗ ಎದ್ದಾಂವ ಬೀಳ್ತಾನ ಬಿದ್ದಾಂವ ಏಳ್ತಾನ ಇದರೊಳಗ ನಕ್ಕಾಂವನೇ ಗೆದ್ದಾಂವ

----------------------------------

ನೋಂದಣಿ ಐಡಿ : KPFS2-7920

1
Votes
155
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top