ಕನ್ಕ ನೀನಿಲ್ದೆ
ರಚನೆ : ಹರೀಶ್ ಶೃಂಗ
----------------------------------
ಕನ್ಕ ನೀನಿಲ್ದೇನೇ ನಾನು, ನೀರಿಲ್ದೆ ಒದ್ದಾಡೋ ಮೀನು. ಕಾಲೆಜ್ಜೆ ಸದ್ದಿಲ್ಲ, ಕಣ್ಣೆಲ್ಲಾ ಒದ್ದೆ. ಎಲ್ಲೇ ಒಂಟೋದೆ, ಇಲ್ಲೇ ಇದ್ದಂಗಿದ್ದೆ. ಕೊರ್ಗೇನಾ ನನ್ನೆಲ್ಲಾ ನಾಳೆ? ತಿರ್ಗಾ ಬತ್ತೀನಂತ ಏಳೆ. ನಾ ನಡಿಯೋ ದಾರೀಲಿ ಊವರಳಿ ನಿಲ್ಲೀಂತ ಹಾರೈಕೆ ಮಾಡೋರು ಯಾರೆ? ಅಟ್ಟೀಲಿ ವಯ್ಸಾದ ಜೀವಗಳ್ನ ತಟ್ಟಿ ಆರೈಕೆ ಮಾಡೋರು ಯಾರೆ? ಅವ್ವ ಇಲ್ಲ ಮಕ್ಳ ಒಟ್ಟೇಗೆ ಗಂಜೀನ ಪೂರೈಕೆ ಮಾಡೋರು ಯಾರೆ? ಈ ಬದುಕಲ್ಲಿನ್ನೂನು ಏನೆಲ್ಲಾ ಉಳಿದೈತೋ ಜೊತೆಯಾಗಿ ನಿಲ್ಲೋರ್ಯಾರೆ? ಅಷ್ಟು ದೂರಕ್ಕೆ ನಡಿಯೋರ್ಯಾರೆ?
----------------------------------
ನೋಂದಣಿ ಐಡಿ : KPFS2-7915