ಕಂಡರೆ ಕೇಳುವೆ
ರಚನೆ : ನಂದಿನಿ ಎಂ
----------------------------------
ಕಂಡರೆ ಕೇಳಿ ಬಿಡುವೆ ಆ ದೇವರನ್ನು, ನೀ ನೀಡಿದ ಜೀವನದ ಪರಿಯ ನೋಡೆಂದು ಹತ್ತು ಹಬ್ಬಗಳ ಹರುಷ ತುಂಬಿಸಿ, ಸಾವಿರ ಸಾವುಗಳ ನೋವ ಹರಿಸಿ, ಬದುಕು ಭಾರ ವೆನಿಸಿ, ಮನಸು ಜಟಿಲ ವೆನಿಸಿ, ಅಗೋಚರದ ಪ್ರಶ್ನೆ ಎನಿಸಿ, ಮೂಡಿ ಮೂಡದ ಭರವಸೆ ಎನಿಸಿ, ಕಾಣದೆ ನೀ ಏಕೆ ಕುಳಿತಿರುವೆ ಈಗ ಶಿಲೆ ಎನಿಸಿ. ಓ ದೇವನೇ ಕೇಳುವೆ ನಿನ್ನ, ಕಂಡು ಕಾಣದ ಕಣ್ಣನಿತ್ತು, ನೋಡಿ ಮಿಡಿಯದ ಮನಸು ಕೊಟ್ಟು, ಅಗಣಿತ ಆಸೆಯನಿತ್ತು, ಸೋಲುವ ಸಂಶಯ ಕೊಟ್ಟು, ಬಯಸದೆ ಬದುಕನಿತ್ತು, ಬೆಸೆಯದ ಬಂದವನು ಕೊಟ್ಟು, ಕಾಡುವ ಪ್ರಶ್ನೆಯನಿತ್ತು, ಕಾಣದ ಉತ್ತರವನ್ನು ಕೊಟ್ಟು, ಸಂತೆಯಾದ ಈ ಅಸಂತಸ ಬದುಕಿನ ಅರ್ಥವೇನೆಂದು ಕಂಡರೆ ಕೇಳುವೆ.
----------------------------------
ನೋಂದಣಿ ಐಡಿ : KPFS2-7916