Submission 4196

ಅವಳೊಳಗೆ

ರಚನೆ : ವೀಣಾ ಗಣಪತಿ ಹೆಗಡೆ

----------------------------------

ಹೆತ್ತವರು ಭಾರ ಇಳಿಸಿಹರು ಕುಡುಕ ಗಂಡನ ಕಟ್ಟಿಹರು ಹಣದ ಆಮಿಷಕ್ಕೆ ಮಾರಿಹರು ಕಂಬನಿಯ ಒರೆಸಲು ಯಾರಿಹರು ಯಾರದೋ ದುರಾಸೆಗೆ ನಾ ಬಲಿಯಾದೆ ಇನ್ನಾರದೋ ಚಟಕ್ಕೆ ನಾ ದಾಸಿಯಾದೆ ಮಾದಕ ಅಮಲಿನಿಂದ ದೇಹವು ಬಳಲಿದೆ ಈ ಕೂಪದಿಂದ ಹೊರಬರಲಾರದೆ ಮನ ಶಪಿಸುತ್ತಿದೆ ಈ ಜಗ ಸ್ವಾವಲಂಬಿ ಜೀವನ ನಡೆಸಲು ಬಿಡುತ್ತಿಲ್ಲ ಬೆನ್ನ ಹಿಂದೆ ಕೊಂಕು ಮಾತು ಆಡುವರಲ್ಲ ರಾತ್ರಿ ರಾಣಿಯರೆಂದು ನಿಂದಿಸುವರಲ್ಲ ನನ್ನೊಳಗೆ ನರಕಯಾತನೆ ಅನುಭವಿಸುತ್ತಿರುವೆನಲ್ಲ ಮೂಡಬೇಕಿದೆ ಸಾಕ್ಷರರಲ್ಲಿ ಅರಿವು ಅಳಿಯಬೇಕಿದೆ ನೋಟಿನ ದಾಹವು ಪ್ರತಿ ಹೆಣ್ಣನ್ನು ತಾಯಿಯಂತೆ ಗೌರವಿಸಬೇಕು ನಾವು

----------------------------------

ನೋಂದಣಿ ಐಡಿ : KPFS2-7914

2
Votes
170
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top