ಬಾಳು ಪರಿಶುದ್ಧವಿರಲಿ
ರಚನೆ : ಅನ್ನಪೂರ್ಣಾ ಬೆಜಪ್ಪೆ
----------------------------------
ಮುಗಿಲಳಿದ ಬಾನಂತೆ ಮನವಿರಲಿ ತಿಳಿಯಾಗಿ ಮೊಗದಲ್ಲಿ ಮೂಡಿರಲಿ ಚೆಲುವಾದ ನಗುವು ಹಗೆಹೊಗೆಯನರಿಯದಿಹ ಮಗುವಾಗಿ ಭಾವದೊಳು ಭಗನಂತೆ ಹೊಳೆಯುತಿರು ಜಗದೊಳಗೆ ದಿನವು ಮಾತಲ್ಲಿ ಮಧುವಿರಲಿ ನೋಟದಲಿಯೊಲವಿರಲಿ ಹತ್ತಿಯೊಲು ಮೃದುವಿರಲಿ ಭಾವಾಂತರಂಗ ನೀತಿ ನಡೆಯಲ್ಲಿರಲಿ ರೀತಿ ಕರ್ಮದೊಳಿರಲಿ ಪ್ರೀತಿಯುತವಾಗಿರಲಿ ತೆರೆವಂಥ ಸಂಗ ಮೊಲ್ಲೆಯೊಲು ಘಮಿಸಿರಲಿ ಬದುಕಿನಾ ಪಥವೆಲ್ಲ ಸುಳ್ಳುಗಳು ಜಿಹ್ವೆಯನು ತಾ ಸೋಕದಿರಲಿ ಮುಳ್ಳಲಿರಿಯುವ ನೇಹ ತೋರದಿರು ಅನ್ಯರಲಿ ಫುಲ್ಲದೊಲು ಬಾಳೆಲ್ಲ ಪರಿಶುದ್ಧವಿರಲಿ
----------------------------------
ನೋಂದಣಿ ಐಡಿ : KPFS2-7869