ಕೂಸು
ರಚನೆ : ಶ್ಯಾಮಲಾ ಸುರೇಶ್ ಕುಲಾಲ್
----------------------------------
ಕರುಳಬಳ್ಳಿಯ ಕೂಸು ತುಳಿದಂತೆ ಅರಳಿತು ನೂರು ಕನಸು ಹೆಣ್ಣೋ, ಗಂಡೋ ಯಾವುದಾದರಿರಲಿ ಬೊಗಸೆ ತುಂಬ ಪ್ರೀತಿಸುವೆನೆಂದಿತು ಮನಸ್ಸು ಕರುಳಿಗಪ್ಪಿದ ಕೂಸು ಮಡಿಲಿಗಂಟಿತು ಖುಷಿ ಖುಷಿಯನ್ನು ಎಲ್ಲರಿಗಂಚಿತು ಅಳುವುದೋ ನಗುವುದೋ ಏನೇ ಇರಲಿ ಹೆಣ್ತನಕ್ಕೆ ತಾಯ್ತನವಲ್ಲವೆ ಗರಿಮೆ ಮಡಿಲಲ್ಲಿನ ಪುಟ್ಟ ಮಗು ನಕ್ಕಿತ್ತು ಸಣ್ಣಗೆ ಭಾವನೆಗಳ ಹೂ ಬಿರಿಯಿತು ಮೆಲ್ಲನೆ ಕಪ್ಪೋ ಬಿಳಿಪೋ ಚಿಂತೆಯಿಲ್ಲ ಹೆತ್ತತಾಯಿಗೆ ಹೆಗ್ಗಣವಾದರೂ ಅದು ಮುದ್ದು.
----------------------------------
ನೋಂದಣಿ ಐಡಿ : KPFS2-7868