Submission 4140

ಶಿಕ್ಷಣ

ರಚನೆ : ಅಶ್ವಿನಿ ಭೀ ಬರಗಾಲಿ

----------------------------------

ಶಿಕ್ಷಣವೇ ಜ್ಞಾನದ ಲಕ್ಷಣ ಶಿಕ್ಷಣವಿಲ್ಲದೆಲ್ಲವೂ ಅವಲಕ್ಷಣ ಶಿಕ್ಷಣ ಬದುಕಿನ ಪರೀಕ್ಷಣ ಶಿಕ್ಷಣವೇ ಜಗದ ನಿರೀಕ್ಷಣ. ಶಿಕ್ಷಣವ ಅಶಿಕ್ಷಿತರಿಗೆ ಕಲಿಸೋಣ ಶಿಕ್ಷಣದ ಹೊಂಬೆಳಕು ಬಿತ್ತೋಣ ಶಿಕ್ಷಣದ ಬಲಿಷ್ಠ ಭಾರತ ನಿರ್ಮಿಸೋಣ ಶಿಕ್ಷಣದ ಅಕ್ಷರ ಕಸ್ತೂರಿ ಎಲ್ಲೆಡೆ ಹರಡೋಣ. ಶಿಕ್ಷಣಕ್ಕೆ ಮನೆಯೇ ಮೊದಲ ತಾಣ ಶಿಕ್ಷಣದಿ ವ್ಯಕ್ತಿತ್ವದ ಅಭಿವ್ಯಕ್ತಿಯ ನಿರ್ಮಾಣ ಶಿಕ್ಷಣ ಉಣಿಸುವುದು ಕವಿ ಕಾವ್ಯಗಳ ರಸದೌತಣ ಶಿಕ್ಷಣವೇ ಸನ್ಮಾರ್ಗದ ಬದುಕಿಗೆ ಕಾರಣ. ಶಿಕ್ಷಣ ಭಕ್ತಿ ಭಾವದ ಭಾವನೆಗಳ ಕಿರಣ ಶಿಕ್ಷಣ ಅಸ್ತ್ರ ಶಸ್ತ್ರಗಳಿಂದಾದ ಚಲುವ ಹೂರಣ.

----------------------------------

ನೋಂದಣಿ ಐಡಿ : KPFS2-7870

18
Votes
178
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top