Submission 4110

ಕಾನಸುಗಾರಳ ಕವಿತೆ

ರಚನೆ : ಆಶಾದೀಪ

----------------------------------

ಬೆಳ್ಳಿ ಚುಕ್ಕಿಗೆ ಅಂಗಳ ಹೊದಿಸಿದ ಬಾನಿಗೇ ಒಲವಿನ ಮನೆಕೊಡಿಸಿ ವಿಳಾಸವಿರದ ಪ್ರಣಯದ ಹೊಸ ಪಯಣಕೆ ಮನದ ಪ್ರಾಣಿಯ ಅಣಿಯಾಗಿಸುವಾಸೆ ಕನಸೇ ಜೀವಿಸಿದ, ಬದುಕಿನ ಗುಟುಕಲಿ ಬಿಳ್ಕೊಟ್ಟ ಕಾಲವ ನೆನದು ಅಳು ಆರಿದ ಕಣ್ಣಲಿ ಹೊಮ್ಮಿದ ಸಮಾಧಾನವ, ಸಂತೈಸಿ ಮಾತಾಡಿಸುವ ಆಸೆ.. ನವೀಲಾಗಲೇಬೇಕು, ಕೋಗಿಲೆಯ ಸ್ನೇಹ ಬೇಕು! ತುಳಿದರೂ ಕಾಲಡಿಯ ತೊಳೆಯ ಬರುವ ಸಾಗರದಂತೆ ಶರಣಾಗಬೇಕು! ಮುಂಗುರುಳಿಗೆ ಸಿಕ್ಕ ಗಾಳಿಗದನು ನಾ ಹೇಳಬೇಕು ಸ್ನೇಹಕೂ, ಪ್ರೀತಿಗೂ ಬೆಲೆಯಿರದ ಬಡತನ ನನ್ನೊಳಗೆ ನಾ ನನ್ನನೆ ಬಂಧಿಸಿ ನಿಲ್ಲುವಷ್ಟು! ಆಸೆಗೇನಿದೆ ಕಲ್ಪನೆಯ ಹೊರತಾಗಿ,, ಆವರಣದಾಚೆಗೆ ಬರಲು ಪರಿಚಯ ಬೇಕಿದೆ ಮನುಷ್ಯನ ಸಂಪರ್ಕ ಇನ್ನಷ್ಟೆ ಸಿಗಬೇಕಿದೆ

----------------------------------

ನೋಂದಣಿ ಐಡಿ : KPFS2-7851

1
Votes
137
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top