Submission 4112

ಮನಸ್ಸು

ರಚನೆ : ಬಿ ಎಚ್ ವೀರಾಚಾರಿ

----------------------------------

ಮನವೋ ಇದು. ಸಾಸಿರ ತುಡಿತಗಳಂದದಿ ನಾಗಲೋಟದಿ ಓಡುವ ಹಯವೋ ಇದು ಚಂಚಲ,ವಿಚಲ,ಸಂಚಲದ ಸರೋವರವಿದು ಭಾವನೆಗಳಿಗೆ ವರ್ಣವ ಲೇಪಿಸುವ ಕುಂಜವೋ ಇದು ಷಟ್ವರ್ಗಗಳ ಮಿತ್ರರ ತಾಣವಿದು ಈ ಮಿತ್ರರ ಬಳಗವ ನಿಗ್ರಹಿಸಿ ಬಾ ನಿಶ್ಚಲ ತೋಟಕ್ಕೆ ನಿನ್ನಿ ಮೋಹದುಂಬಿಯ ಕಾನನದಿ ಹೊರಬರಲು ಹಪಹಪಿಸಿದರು ಮಹಾನ್ ಪುರುಷರು, ಬರಬೇಕಿದೆ ನಿನಗೂ ಸಹ ಬುದ್ಧನ ತಾಳ್ಮೆ, ವಿವೇಕರ ಧೃಡತೆ,ಬಸವನ ಅಂತ:ಕರಣ ಪೈಗಂಬರರ ವಿಚಾರ ಅಪ್ಪಿಕೋ,ಒಪ್ಪಿಕೋ, ಮನವೇ ನೀ ಅಳಿಯುವ ಮುನ್ನ.

----------------------------------

ನೋಂದಣಿ ಐಡಿ : KPFS2-7852

9
Votes
142
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top