ಭೃಮೆ...
ರಚನೆ : ಗಣಪತಿ ಹೆಗಡೆ
----------------------------------
ಕಾಣುವುದೆಲ್ಲವು ನಿಜವಲ್ಲ ನಿಜವೆಲ್ಲವೂ ಕಾಣುವುದಿಲ್ಲ ನಿಜದಂತಿರುವುದು ಸುಳ್ಳೆಲ್ಲ ಭೃಮೆಯೇ ನಮ್ಮ ಜೀವನವೆಲ್ಲ ದೂರದ ಬೆಟ್ಚ ಕಣ್ಣಿಗೆ ನುಣ್ಣಗೆ ಹತ್ತಿರ ಹೋದರೆ ಜಾಡು ಬಗೆಬಗೆ ಅತ್ತಿಯ ಹಣ್ಣು ಕಣ್ಣಿಗೆ ಸುಂದರ ಒಳಗೆ ತುಂಬಿದೆ ಹುಳಗಳ ಹಂದರ ಯಾವುದು ಸತ್ಯ ಯಾವುದು ಮಿಥ್ಯ ಸತ್ಯದೊಳಗಿನ ಮಿಥ್ಯ ಯಾವುದೋ ಹಿತ ಜನರೊಳಗಿನ ನಿಹಿತ ಆವುದೋ ತಿಳಿಯೆವು ಭ್ರಮೆಯ ಕಣ್ಪೊರೆಯಲ್ಲಿ ಅನಿಶ್ಚಿತವಾದ ಈ ಬದುಕಿನಲಿ ನಿತ್ಯವೂ ಹೋರಾಟ ನನದೆನ್ನುವ ಕಲ್ಪನೆಯಲ್ಲಿ ಭರವಸೆಯ ನಾಳೆಯ ಭ್ರಮೆಯಲ್ಲಿ ಕಾಣದ ನಾಳೆಯ ನಿಜ ಸುಳ್ಳಿನಲಿ
----------------------------------
ನೋಂದಣಿ ಐಡಿ : KPFS2-7845