ಭಾವನೆಗಳು ಮಾರಾಟಕ್ಕಿವೆ
ರಚನೆ : ಆಸ್ಮಾ ಕೆ
----------------------------------
ಈ ಪ್ರಪಂಚದ ನಾಗಾಲೋಟದಲಿ ಸಂಬಂಧಗಳ ಬೆಲೆ ಕ್ಷೀಣಿಸುತಿದೆ... ಎಲ್ಲವೂ ಕಳೆದು ಹೋಗುತಿವೆ... ಕೊಳ್ಳುಬಾಕುತನದ ಮೋಹ ಹುಚ್ಚಾಗುತಿದೆ... ಭಾವನೆಗಳು ಮಾರಾಟಕ್ಕಿವೆ...! ಮರೆಯಲಾಗದ ಅದ್ಬುತಗಳನೇ ಮರೆಯುತ್ತಿದ್ದೇವೆ... ಧನದ ಹಿಂದೆ ದುಂಬಾಲು ಬಿದ್ದಿದ್ದೇವೆ... ಯಾವುದೂ ಶಾಶ್ವತವಲ್ಲದ ಈ ಜಗದೊಳು ನಮ್ಮ ಭಾವನೆಗಳು ಯಾವ ಲೆಕ್ಕ...? ಭಾವನೆಗಳು ಮಾರಾಟಕ್ಕಿವೆ...!
----------------------------------
ನೋಂದಣಿ ಐಡಿ : KPFS2-7844