Submission 4096

ಇಳೆ-ಮಳೆಯ ಒಲವಗೀತೆ!

ರಚನೆ : ಚೇತನ್ ರಮೇಶ್

----------------------------------

ಮಳೆಯೇ ಮುದ ನೀಡು ಬಾ.. ದಣಿದ ಧರೆಗೆ ಮನದ ಮನೆಗೆ ಮುದ್ದು ಮಗುವ ನಗುವಂತೆ ಬಾ.. ಮೋಡಗಳ ಮುದ್ದಾಡುತ, ತಂಗಾಳಿ ತೂಗುಯ್ಯಾಲೆಯಲಿ ತೇಲಾಡುತ ಬಾ.. ಇಳೆಯ ತೊಳೆದು ಮಿಂಚಿನಣತೆ ಹಿಡಿದು ಹಸಿರ ಮಡಿಯುಟ್ಟು ನಡೆದು ಬಾ‌.‌. ತುಂತುರು ಹನಿ ಸಿಂಚನದಲ್ಲಿ, ಚಟಪಟ ಗೆಜ್ಜೆಯ ನಾದದಲ್ಲಿ ಕುಣಿಯುವ ಕನ್ಯೆಯ ಕಾಲ್ಗೆಜ್ಜೆಯಾಗಿ ಬಾ... ಮಳೆಯೇ ನೀ ಮುದ ನೀಡು ಬಾ, ಮೇಘಸಂದೇಶವ ನೀಡುವ ಪ್ರಕೃತಿಯ ರಾಯಭಾರಿಯಾಗಿ ಬಾ!

----------------------------------

ನೋಂದಣಿ ಐಡಿ : KPFS2-7843

48
Votes
317
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top