Submission 4102

ನಿನ್ನಂತವರು ಯಾರು?

ರಚನೆ : ನಿಂಗರಾಜ್ ದೊಡ್ಮನಿ

----------------------------------

ಗುಡಿಗೋಪುರವ ಸುತ್ತಿ, ನಿನ ಗರ್ಭದಿ ಬಿತ್ತಿ, ರಕ್ತ -ಮಾಂಸಗಳ ಎರವಲ ನೀಡಿ, ಹೆರುವೆ ನವಮಾಸಗಳ ರೂಪವ ಕೂಡಿ ಇರುವರೆ ಜಗದಲಿ ನಿನ್ನಂತವರು ಯಾರು? ಎದೆ ರಕ್ತವ ಹಾಲಾಗಿ ಉಣಿಸಿ, ನಿತ್ಯ ನಿದ್ದೆ -ನೀರಡಿಕೆ, ಊಟವ ತ್ಯಜಿಸಿ, ಮಗುವ ಬೆಳವಣಿಗೆಯಲಿ ಜೀವನ ನಡೆಸಿ, ಇರುವರೆ ಜಗದಲಿ ನಿನ್ನಂತವರು ಯಾರು? ನಿನ್ನ ಇಷ್ಟು ತ್ಯಾಗ, ನಿಸ್ವಾರ್ಥ ಪ್ರೀತಿಗೆ ಸಿಕ್ಕ ಬೆಲೆ ಹಾಲುಂಡ ಎದೆಗೆ ಒದೆಯುವರು, ನಿನ್ನೂಟ ಕಿತ್ತೂಕೊಳ್ಳುವರು, ನಿನ್ನದೆ ಮನೆಯಿಂದ ಹೊರಹಾಕುವರು, ಇಷ್ಟಾದರೂ ನಗುತ ಸ್ವೀಕರಿಸುವೆ ಮೌನದಿ ಇರುವರೆ ಜಗದಲಿ ನಿನ್ನಂತವರು ಯಾರು?

----------------------------------

ನೋಂದಣಿ ಐಡಿ : KPFS2-7846

7
Votes
163
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top