ನೆರಳು ಬೆಳಕಿನಾಟ
ರಚನೆ : ಲಕ್ಷ್ಮೀ ಪಾಟೀಲ
----------------------------------
ನೆರಳು ನಂಬಿ ಬೆಳಕು ತೊರೆದ ಭಾವ ನೀ ಬದುಕು ಕಲಿಸಿದ ವಿಪ್ಲವ ಕಲಿತಾಗಿದೆ ಮರೆತು ನಡೆವ ಕರ್ವ ಪ್ರೀತಿಗೇ ರಾಧೆ ಕೃಷ್ಣರೇ ಪರ್ವ ಮೋಡ, ಮಳೆ ತೊರೆದಾಗಲೇ ಹಸಿರು ಉಳಿದಿರುವುದೆಲ್ಲವು ತಾರ್ಕಿಕ ಉಸಿರು ನಶಿಸುವುದೇ! ಮರಕೆ ನಿಷ್ಠೆ ಇರುವ ಬೇರು ಮೌನದಲ್ಲಿ. 'ನಿನಗೇ ಪ್ರೀತಿ ಕರಾರು' ನಮ್ಮ ನೋವು ಜಗದ ಪ್ರೀತಿಗೆ ವರವಾಗಲಿ ನಿನಗೇ, ಪ್ರಾಶಸ್ತ್ಯ ಭಾವ ಅನುರಣನಗಳಲಿ ಹೇಳದೆ ಉಳಿದ ಮಾತುಗಳು ನಂಬಿಕೆಯಾಗಲಿ ನೆರಳು ಬೆಳಕಿನಾಟ ಅವನಿಗೇ ಸರಿಹೋಗಲಿ!
----------------------------------
ನೋಂದಣಿ ಐಡಿ : KPFS2-7775