Submission 4012

ಹೃದಯವ ಕಟ್ಟೋಣ

ರಚನೆ : ಲಿಂಗದಹಳ್ಳಿ ಚೇತನ್ ಕುಮಾರ್

----------------------------------

ಇಲ್ಲಿ, ಪ್ರತಿ ಹೆಜ್ಜೆಯ ಗುರುತ್ತನ್ನು ಕೊನೆಯ ಬಿರುಗಾಳಿ ಅಳಿಸುತ್ತದೆ; ಮೋಡಗಳ ಕಟ್ಟುತ್ತಾ, ನಾಶ ಮಾಡುತ್ತಾ ಆಕಾಶವೂ ಹಾಗೆಯೇ ಇದೆ ದಿಟ್ಟ ಭರವಸೆಯಿಂದ ಹೃದಯ ಮುಂದಕ್ಕೆ ಚಲಿಸುತ್ತದೆ ನೆಲದ ಮೇಲೆ ಹೆಜ್ಜೆಗುರುತಿನ ಪ್ರಾರ್ಥನೆಗಳೊಂದಿಗೆ ಭರವಸೆಯೊಂದೆ ಉಳಿಯುತ್ತವೆ ಕನಸುಗಳಲ್ಲಿ ಸೂರ್ಯನಿಂದ ಸುಟ್ಟು ಹೋದ ನೆಲ ತಂಪಾಗುತ್ತದೆ ಬೆಳ್ಳಿ ನಗರವು ಕಣ್ಣುಗಳ ಮುಂದೆ ತೇಲುತ್ತದೆ ಪ್ರತಿಧ್ವನಿಸುವ ಧ್ವನಿಗಳಿಗೆ ಗಾಳಿ ಮಾತ್ರ ಉತ್ತರಿಸುತ್ತದೆ ಬಾಯಾರಿಕೆ ತಾಳ್ಮೆಯನ್ನು ಕಲಿಸುತ್ತದೆ ರಾತ್ರಿ ವಿಶಾಲವಾದ ಆಕಾಶದ ಕೆಳಗೆ ನಕ್ಷತ್ರಗಳಿಗೆ ಅಂಚುಗಳಿರುವುದಿಲ್ಲ ನಾವು ಪ್ರತಿ ಹೃದಯವನ್ನು ಯಾವ ಗಡಿ ಅಂಚುಗಳಿಲ್ಲದಂತೆ ಕಟ್ಟೋಣ

----------------------------------

ನೋಂದಣಿ ಐಡಿ : KPFS2-7774

29
Votes
235
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top