Submission 4016

ಕನ್ನಡದ ಬಗೆಗಿನ ತವಕ

ರಚನೆ : ಭಾಗ್ಯಶ್ರೀ ಹಿರೇಮಠ

----------------------------------

ಸುಂದರ ಕಾಡು ವನಗಳಲಿ ಅಲಿದೆ, ಸವಿದೆ ಕನ್ನಡದ ಸಿಹಿ ಜೇನವ. ಹರಿವ ನದಿ ಕಾವೇರಿಯಲಿ ಮುಳುಗಿದೆ, ಕೇಳಿದೆ ಕನ್ನಡದ ಹಿತ ಸಂಗೀತವ. ಮುಗಿಲೆತ್ತರ ಬೆಳೆದ ಪರ್ವತ ಏರಿದೆ, ತಣಿದೆ ಕನ್ನಡದ ತಂಪು ಗಾಳಿಯ. ಇತಿಹಾಸದ ಪುಟ ತಿರುವಿ ಓದಿದೆ, ಮೆಚ್ಚಿದೆ ಕನ್ನಡದ ವೀರ ಶೂರರ. ಕಲ್ಲು ಕಲ್ಲಿನಲಿ ಹುಡುಕಿ ಹೋದೆ. ಶಿಲೆಯಾದೆ ನೋಡಿ ಕನ್ನಡದ ಕಲೆಸಂಸ್ಕೃತಿಯ. ಮರುಳಾದೆ ತಿದ್ದಿ ಇಟ್ಟ ಶ್ರೀ ರಂಗನ ತಿಲಕಕೆ, ಪರಿಮಳ ಸೂಸುವ ಕನ್ನಡದ ಶ್ರೀಗಂಧದ.ಇಣುಕಿ ನೋಡಿದೆ ನನ್ನ ಹೃದಯ ಗೂಡಲಿ,ಅರಿತೆ ಕನ್ನಡದ ಬಗೆಗಿನ ತವಕವ

----------------------------------

ನೋಂದಣಿ ಐಡಿ : KPFS2-7776

9
Votes
187
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top