ನೆಲದ ನಾದ
ರಚನೆ : ಪ್ರವೀಣ ಬನಸೋಡೆ
----------------------------------
ಮೋಡದ ಬೆವರಲ್ಲಿ ಧಾರೆ ಬರದಿದೆ, ಬತ್ತಿದ ನೆಲದಲಿ ಜೀವ ದಣಿದಿದೆ. ಸಾಲವೆಂಬ ಶೂಲವು ಎದೆಯಲಿ ಮುಗಿಲಾಗಿದೆ, ಹೋರಾಟದ ಹಾದಿಯಲಿ ಹೃದಯವೇ ನೊಂದಿದೆ. ಕಷ್ಟದ ಕವಚ ತೊಟ್ಟು ಬದುಕು ಸಾಗುತ್ತದೆ, ಆದರೂ ಮುಖದಲಿ ನಗುವ ಕಿರಣ ಹೊಳೆಯುತ್ತದೆ. ಮಹಾನ್ ಮನಸು ಬಯಸುವ ಆಸೆ ಒಂದೇ — ಎಲ್ಲರ ಹೊಟ್ಟೆಗೆ ಅನ್ನ ತುಂಬಿ ಹರಿಯಲೇಬೇಕು. ದೇಶದ ಬೆನ್ನೆಲುಬು ರೈತನೆಂದರೂ, ಅವನಿಗೆ ಸಿಗದ ಗೌರವದ ಮಳೆಯಾದರೂ. ಅನ್ನ ದೇವರೆಂದು ಎಲ್ಲರೂ ಹೇಳಿ, ಅವನ ಕಣ್ಣೀರು ನೆಲದ ನಾದವಾಗಿ ಬೆಳಲಿ. ಬೆವರಿನ ಹನಿಯಿಂದ ಸಿಂಚನವಾಗುತಿದೆ, ಮಣ್ಣಿನ ಮಮತೆಯಲಿ ಭೂಮಿ ಜೀವಂತವಾಗುತಿದೆ.
----------------------------------
ನೋಂದಣಿ ಐಡಿ : KPFS2-7643