Submission 3842

ಕರುಳ ಬಳ್ಳಿ

ರಚನೆ : ಕುರುವಳ್ಳಿ ತಿಮ್ಮಯ್ಯ

----------------------------------

ಒಂದೇ ಮರದಡಿ ಗೂಡು ಕಟ್ಟಿದ ಹಕ್ಕಿಗಳು ಪುಕ್ಕ ಬೆಳೆದ ಮೇಲೆ ಹಾರಿ ಹೋದ ಮರಿಗಳು ಮಡಿಲ ಬಳ್ಳಿ ಕಳಚಿ ಮೀರಿ ನಿಂದಾ ಕುಡಿಗಳು ರೋದಿಸಿ ಶೋಧಿಸಿದ ರಂಭೆ ಕೊಂಬೆ ಮನಗಳು ಒಡನಾಡಿ ಬಂದು ಹೊಡೆದ ದಾರಿ ನೂರಾರು ಮನಸ್ಸೆ ಜಾರಿ ಹೃದಯ ಮುರಿತ ಸಾವಿರಾರು ಪೋಷಿಸಿ ಬೆಳೆಸಿ ಕರವೇ ತಪ್ಪಿ ನೆನಪ ಅಲೆಗಳು ಕರುಳ ಬಳ್ಳಿ ಕರಗಿ ನೀರಾಗಿ ಹರಿದ ಕನಸುಗಳು ಮುಪ್ಪು, ಒಂಟಿತನ ಸುಕ್ಕು ಗಟ್ಟಿದ ಭಾವನಾ ಒಪ್ಪಿಕೊಳ್ಳದ ಮುನಿಸು ಸೆಳೆಯುವ ಮೈಮನ. ಗಾಳಿ ಬಲಿತು ಒಣಗಿ ಹೋದ ಯೋಚನಾ ರಕ್ತ ಸಂಬಂಧ ಮರೆಮಾಚಿ ಅನಾಥ ಸೆರೆಮನ ಹಸಿರು ಮರೆತು ಉಸಿರು ನುಂಗಿದ ಮರಗಳು ಗಾನ ಮುಗಿಸಿದ ಬಳಿಕ ಮೌನತಳಿದ ಹಕ್ಕಿಗಳು

----------------------------------

ನೋಂದಣಿ ಐಡಿ : KPFS2-7644

0
Votes
104
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top