Submission 3760

ಓಂಕಾರ ನಾದ

ರಚನೆ : ಎ ಎಂ ಜಯಶ್ರೀ

----------------------------------

ಯಾವುದೀ ಹೊಸಹಾಡು ಇಲ್ಲಿಯವರೆಗೂ ತಿಳಿದಿರಲಿಲ್ಲ ಸುತ್ತೆಲ್ಲ ಹೊಸನೋಟ ನಿನ್ನೆಯವರೆಗೂ ನೋಡಿರಲಿಲ್ಲ ಯಾವುದೀ ಹೊಸಭಾವ ನನ್ನೊಳಗಿತ್ತೇ ಗೊತ್ತಿರಲಿಲ್ಲ ಚುಂಬಕದ ಸೆಳೆತ ಮೀರಿ ದೂರ ನಿಲಲಾಗುತಿಲ್ಲ ಯಾವುದೀ ಹೊಸಶಕ್ತಿ ಇಂದಿನವರೆಗೂ ಇರಲೇ ಇಲ್ಲ ಗುರುತ್ವಕೆ ನಾನೊಳಗಾದರೂ ಮನಸ್ಸಿಲ್ಲಿ ನಿಲ್ಲುತಲಿಲ್ಲ ಪ್ರೀತಿ ಎಂದರೆ ಇದೇ ಏನೋ ಹೊಸತನವದರ ಲಕ್ಷಣವೇನೋ

----------------------------------

ನೋಂದಣಿ ಐಡಿ : KPFS2-7582

8
Votes
166
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top