ಸಲಾಂ ರೈತ
ರಚನೆ : ರಾಕೇಶ್ ಬ್ಯಾಡಗಿ
----------------------------------
ಸಲಾಂ ರೈತ ಸಲಾಂ ರೈತ ಭೂಮಿಪುತ್ರ ಅನ್ನದಾತ ಕೀರ್ತಿ ಪುತ್ರ ನೀತಿವಂತ ಸಲಾಂ ರೈತ ಸಲಾಂ ರೈತ ಬಿಸಿಲು ಮಳೆಗೆ ಮೈಯೊಡ್ಡಿ ನಿಂತ ಬೆವರ ಸುರಿಸಿ ಬೆಳೆ ಬೆಳೆದು ನಿಂತ ಮುಂಗಾರು ಹಿಂಗಾರು ಇವನ ಜೀವ ಜೀವಂತ ಎಲ್ಲರನು ತನುಮನ ತಣಿಸುವ ಧೀಮಂತ ದೇಶದ ಅನ್ನಕ್ಕೆ ನೀ ಕರ್ತೃ ಸರ್ವರಿಗೂ ನೀ ಅಜಾತಶತ್ರು ಸಮೃದ್ಧ ಸಮಾಜಕ್ಕೆ ನೀನೇ ಧಾತೃ ಒಡಲ ತುಂಬಿಸುವ ಪಿತೃ ನೇಗಿಲ ಹಿಡಿದ ನಾಯಕ ದೇಶದ ಸಂಪತ್ತು ಹೆಚ್ಚಿಸುವ ಧನಿಕ ಎಲ್ಲರ ಹೊಟ್ಟೆ ತುಂಬಿಸುವುದ ಕಾಯಕ ಬೆಲೆಕಟ್ಟಲಾಗದು ನಿನ್ನ ಸೇವೆಗೆ ಧನ ಕನಕ
----------------------------------
ನೋಂದಣಿ ಐಡಿ : KPFS2-7583