ಭೂ ತಾಯಿಯ ಅಂತರಾಳ
ರಚನೆ : ರಮೇಶ್ ಬಿ ಸಂಗಟಿ
----------------------------------
ಮಾನವನ ಅತಿಯಾದ ಹುಚ್ಚು ಆಸೆಗಳು ಮನೆ ಮಂದಿಗೆಲ್ಲವೂ ಬೇಕು ಕಾರು ಬೈಕು ಸೇರುತಿವೆ ಅನೇಕ ರಾಸಾಯನಿಕಗಳು ಎಲ್ಲವೂ ಸುಡುತಿವೆ ಭೂ ತಾಯಿಯ ಮಡಿಲನು...!! ಕೇಳಿಲ್ಲ ಯಾರಿಗೂ ಕಾಣಿಕೆ - ದಕ್ಷಿಣೆ ಆದರೂ ಉರುಳಿತಿವೆ ಮರಗಳು ಧರೆಗೆ ಮಳೆ ಬೆಳೆಯಿಲ್ಲದೆ ಬರದಾಗಿದೆ ಒಡಲು ಹೆಚ್ಚಾಗುತ್ತಿದೆ ದಿನದಿಂದ ದಿನಕ್ಕೆ ಬಿಸಿಲು..!! ಓ ಜಲರಾಯ ಎಲ್ಲಿರುವೆ ನೀ ಎಲ್ಲಿರುವೆ ಬಾ ಮುಹೂರ್ತ ಸಮಯ ಬಂದಿದೆ ಅಕ್ಷತೆ ಕಾಳಿನಂತೆ ನಾಲ್ಕು ಹನಿಗಳನ್ನಾದರೂ ಉದುರಿಸಿ ನನ್ನ ತಲೆಗೆ ತಂಪೆರಸು!! ಮಾನವರನ್ನು ಕ್ಷಮಿಸು ಪ್ರಾಣಿ-ಪಕ್ಷಿ ಸಂಕುಲಗಳನ್ನು ರಕ್ಷಿಸು......!!
----------------------------------
ನೋಂದಣಿ ಐಡಿ : KPFS2-7505