ಕನ್ನಡಮ್ಮ
ರಚನೆ : ಸವಿತ. ಸಿ. ಟಿ.
----------------------------------
ಹೆತ್ತಮ್ಮನ ಗರ್ಭದಲ್ಲಿ ಮಲಗಿರುವಾಗ ಎದೆಹಾಲನುಣ್ಣುತ್ತ ಜೋಗುಳ ಆಲಿಸುವಾಗ ತೊದಲು ನುಡಿಯಿಂದ ಗಂಟೆಗಟ್ಟಲೆ ಹರಟುವಾಗ ಮುದ್ದು, ಬೈಗುಳ, ಹೆಮ್ಮೆಯ ನುಡಿಗಳು ಮನದಲ್ಲಿ ಅಚ್ಚಾಗುವಾಗ ಬದುಕಿನ ಜಂಜಾಟದಲ್ಲಿ ಮೌನವೇ ಮಾತಾದಾಗ ನಾನು ಮತ್ತು ನನ್ನ ಹೆತ್ತಮ್ಮನ ನಡುವೆ ಸೇತುವೆಯಾದವಳು ಕನ್ನಡಮ್ಮನಲ್ಲವೇ? ನಮ್ಮುಸಿರಿನೊಂದಿಗೆ ಹುಟ್ಟಿ ಕೊನೆಯುಸಿರಿರುವವರೆಗೆ ನಮ್ಮೊಡನಿರುವವಳು ಕನ್ನಡಮ್ಮನಲ್ಲವೇ? ಕನ್ನಡಮ್ಮನ ಹೃದಯ ಪಲ್ಲಕ್ಕಿಯಲ್ಲಿ ಕೂರಿಸಿ ಕನ್ನಡ ತೇರನ್ನೆಳೆಯೋಣ
----------------------------------
ನೋಂದಣಿ ಐಡಿ : KPFS2-7506