Submission 3580

ನಿನ್ನ ನೆನಪೇ ಪ್ರೀತಿ

ರಚನೆ : ಲಕ್ಷ್ಮಿಕಾಂತ್

----------------------------------

ನಿನ್ನ ನೋಟವೇ ನನ್ನ ಹೃದಯದ ಮೊದಲ ಕವಿತೆಯಾಯಿತು, ನಿನ್ನ ನಗು ನೋಡಿದ ಕ್ಷಣದಲ್ಲೇ ಪ್ರಪಂಚ ಬದಲಾಗಿದೆ. ಮಳೆಯ ಹನಿ ಬೀಳುವಾಗ ನಿನ್ನ ಸ್ಪರ್ಶವಿದೆ ಅನಿಸುತ್ತದೆ, ಗಾಳಿ ಬೀಸುವಾಗ ನಿನ್ನ ಹೆಸರೇ ಹಾಡಿನಂತೆ ಕೇಳಿಸುತ್ತದೆ. ಕಾಲ ಹೋದರೂ ನಿನ್ನ ನೆನಪು ಮಂಕಾಗಲಿಲ್ಲ, ಹೃದಯದ ಪುಟಗಳಲ್ಲಿ ನಿನ್ನ ಹೆಸರು ಅಳಿಸಲಿಲ್ಲ. ನಿನ್ನಿಲ್ಲದ ದಿನಗಳು ಕವಿತೆಯಿಲ್ಲದ ಪುಸ್ತಕದಂತೆ, ಪ್ರತಿ ಕ್ಷಣ ನಿನ್ನ ಪ್ರೀತಿಯೇ ಜೀವದ ಅರ್ಥದಂತೆ. ನಿನ್ನ ಪ್ರೀತಿ ಮೌನದಲಿ ಶಬ್ದವಾಗಿ ಉಳಿದಿದೆ, ನನ್ನ ಹೃದಯ ನಿನ್ನ ಹೆಸರಿನೇ ಉಸಿರಾಗಿಯಿದೆ.

----------------------------------

ನೋಂದಣಿ ಐಡಿ : KPFS2-7440

10
Votes
137
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top