ನಾ ಕ್ಷಮಿಸಿದ್ದೇನೆ
ರಚನೆ : ಪ್ರಕೃತಿ - ಶ್ರುತಿ ಪ್ರಶಾಂತ್
----------------------------------
ನಿಮ್ಮ ನಾನು ಕ್ಷಮಿಸಿದ್ದೇನೆ. ನಿಮ್ಮ ಒರಟು ನುಡಿ, ನಿರ್ಲಕ್ಷ್ಯಸಿದ್ದೇನೆ, ನಿಮ್ಮ ಬಿಗಿ ಹೆಜ್ಜೆಗಳಿಂದ ನನ್ನ ಎದೆ ಬಡಿದರೂ, ನಾನು ಇನ್ನೂ ಹಸಿರಾಗಿಯೇ ನಗುತ್ತಿದ್ದೇನೆ. ನಿಮ್ಮ ದುಷ್ಟ ನಡೆಯನ್ನು ಕ್ಷಮಿಸಿದ್ದೇನೆ, ನಿಮ್ಮ ಲೋಭದ ಗಾಳಿಯಿಂದ ನನ್ನ ಹಸಿರೇ ಮಾಸಿದರು ನಿಮ್ಮ ಆಶೆಯ ಬೀಜಕ್ಕಾಗಿ ನಾನು ಮಣ್ಣಾಗಿದ್ದೇನೆ. ನಿಮ್ಮ ಬೇಜವ್ದಾರಿ ಕೆಲಸವನ್ನೂ ಕ್ಷಮಿಸಿದ್ದೇನೆ, ನನ್ನ ನದಿಗಳ ಹೃದಯದಲ್ಲಿ ನೀವೇ ವಿಷ ಬೀರಿದರೂ, ನಿಮ್ಮ ತಂಪು ಮಳೆಗಾಗಿ ನಾನು ಮೋಡವಾಗಿದ್ದೇನೆ. ನಿಮ್ಮ ಧ್ವಂಸದಲ್ಲಿ ಸಹ ನಾನು ಹೊಸ ಜೀವ ಸೃಷ್ಟಿಸುತ್ತೇನೆ ನನ್ನ ಹೃದಯ ಕಡಿಯುತ್ತಾ, ನಿಮ್ಮ ಶ್ವಾಸ ಉಳಿಸಿದ್ದೇನೆ. ನಿಮಗೆ ಬದುಕಲು ಬಿಟ್ಟಿದ್ದೇನೆ. ನನ್ನ ಮೌನವೇ ನಿಮ್ಮ ಉಸಿರು, ನನ್ನ ಅಳಲಿನೊಳಗೆ ನಿಮ್ಮ ನಗು. ನಾ ಕ್ಷಮಿಸಿದ್ದೇನೆ, ನಿಮ್ಮ ನಾನು ಕ್ಷಮಿಸಿದ್ದೇನೆ ಮನುಜಾ... ಮರೆಯದಿರು, ಕ್ಷಮೆ ಅನಂತವಲ್ಲ, ದಯೆಗೂ ಒಂದು ಅಂಚು ಇದೆ.
----------------------------------
ನೋಂದಣಿ ಐಡಿ : KPFS2-7439