Submission 3572

ಪ್ರೀತಿಯ ಅಪ್ಪ

ರಚನೆ : ಸಹನಾ ಜೋಶಿ

----------------------------------

ಅಪ್ಪ, ಬಾಬಾ ,ದಾದಾ ,ತಂದೆ। ಧೈರ್ಯ ತುಂಬಿರುವುದು ಇವೆರಡು ಅಕ್ಷರಗಳ ಪದಗಳ ಹಿಂದೆ॥ ಸಾಂಸರದ ಭಾರವನು ಹೊತ್ತಿರುವೆ ನೀನು ನಿನ್ನ ಹೆಗಲ ಮೇಲೆ। ಒತ್ತಡವನ್ನು ತೋರದೆ ಕೋಪವನ್ನು ಮಾಡದೆ ನಮ್ಮನ್ನು ಆಡಿಸುವೆ ನೀ ನಗು ನಗುತ್ತಲೆ ॥ ಕಣ್ರೆಪ್ಪೆ ಅಂತೆ ಕಾಯುವೆ ನೀ ನಮ್ಮೆಲರನ್ನು। ಕಲಿಸಿ ಕೊಡುವೆ ದಿನನಿತ್ಯ ಹೊಸ ಹೊಸ ವಿಷಯವನ್ನು ॥ ನನ್ನ ಜೀವನದ ಆದರ್ಶ ನಾಯಕ ನೀನು। ನೀನು ಹಾಕಿದ ಹೆಜ್ಜೆಗಳನ್ನ ಅನುಸರಿಸುತ್ತ ಬೆಳೆದೆ ನಾನು॥ ದುಃಖವಾದಾಗ ಬಿಗಿದಪ್ಪಿಕೊಳ್ಳುವೆ ನಾ ನಿನ್ನನು । ಬೆನ್ನುತಟ್ಟಿ, ಅನುಭವದ ಮಾತುಗಳನ್ನು ಹೇಳಿ, ನೀಡುವೆ ನೀ ಧರ್ಯವನ್ನು॥ ಪಕ್ಷಿಯ ಹಾಗೆ ಹಾರಲು ಕಲಿಸಿದೆ ಬಾನೆತ್ತರಕ್ಕೆ। ತಲೆ ಎತ್ತಿ ಗೌರವದಿಂದ ಇರುವ ಹಾಗೆ ಬೆಳೆಸಿದೆ ನಿನ್ನೆತ್ತರಕ್ಕೆ॥ ಎಷ್ಟೇ ಉನ್ನತ್ತಕ್ಕೇರಿ ಗಳಿಸಿದರು ಗೌರವ ಹಣವನ್ನ। ತೀರಿಸಲಾರೆ ನಾ ನಿನ್ನ ಪ್ರೀತಿಯ ಋಣವನ್ನ॥

----------------------------------

ನೋಂದಣಿ ಐಡಿ : KPFS2-7436

120
Votes
722
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top