ಮಳೆಬಿಲ್ಲು!
ರಚನೆ : ಸುಮಾ. ಆರ್.
----------------------------------
ಅಳುವಿಗೇ ನಗು ತೊಡಿಸಿ ಒಳಗುದಿಗೆ ನೀರೆರಚಿ ಉಳಿದವರ ಕನಸುಗಳ ಹಡೆದವಳ ಅರಿತು, ಹೆಳವಾದ ಭಾವಗಳ ಗರಿಗಳಿಗೆ ಒಲವೂಡಿ, ತಳಬಿಟ್ಟು ಹಾರಲಿ ಸೂರ್ಯಕಾಂತೆ || ಕಳುವಾದ ಒಲವೆಲ್ಲ ಮರೆತಂತೆ ನಸುನಗುತ, ಅಳವಿರದ ಪ್ರೀತಿಯನು ಜಗಕೆಲ್ಲ ಕೊಡುವ, ಉಳಿದಿರುವ ಒಡಲೊರತೆ ಅವಳವಳಿಗೇ ಬಿಡಿರಿ, ಮಳೆ ಸಿಗದೆ ಸುಡದಿರಲಿ ಸೂರ್ಯಕಾಂತೆ || ‘ತುಳಿವುದೇ ತಾಕತ್ತು ಸಹಿಸುವುದು ಆದರ್ಶ‘ ಹುಳುಹಿಡಿದ ಈ ಹಳತ ತೊಳೆದುಬಿಡಿ ಸಾಕು. ಉಳಿದೆಲ್ಲ ಜೀವನಕೆ ಜೊತೆ ನೀಡಿ ಬಲವ ಕೊಡೆ, ಮಳೆಬಿಲ್ಲು ಮೂಡುವುದು ಸೂರ್ಯಕಾಂತೆ ||
----------------------------------
ನೋಂದಣಿ ಐಡಿ : KPFS2-7433